“ಸಿರಿಗನ್ನಡo ಗೆಲ್ಗೆ, ಸಿರಿಗನ್ನಡo ಬಾಳ್ಗೆ”

ಕಲ್ಪವೃಕ್ಷ ಕನ್ನಡ ಸಂಘಕ್ಕೆ ಸ್ವಾಗತ

Various Programs Organized by Kalpavruksha Kannada Sangha

ರಾಜ್ಯೋತ್ಸವ ಪ್ರಯುಕ್ತ  ವಿ ಡಿ ಐ ಟಿ ಸಿಬ್ಬಂದಿಗಳಿಗಾಗಿ ಕಾರ್ಯಕ್ರಮ 

ಕೆ ಎಲ್ ಎಸ್ ವಿ ಡಿ ಐ ಟಿ ಹಳಿಯಾಳದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ  ಸಿಬ್ಬಂದಿಗಳಿಗೆ ಕನ್ನಡ ಭಾಷಾಭಿಮಾನ ಜಾಗೃತಗೊಳಿಸುವ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕನ್ನಡ ಶಬ್ದವನ್ನು ಬರೆಯುವುದರ ಮೂಲಕ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ  ಪ್ರಾಚಾರ್ಯ  ಡಾ. ವಿ ಎ ಕುಲಕರ್ಣಿ ದಿನನಿತ್ಯದ ವ್ಯವಹಾರಗಳಲ್ಲಿ ಸಾಧ್ಯವಾದಷ್ಟು ಕನ್ನಡ ಭಾಷೆಯನ್ನು ಬಳಸೋಣ ಎಂದು ಕರೆ ನೀಡಿದರು. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು. ಮಹಾವಿದ್ಯಾಲಯದ ವಿವಿಧ ವಿಭಾಗದ ತಂಡಗಳಿಗೆ  “ಅಂತ್ಯಾಕ್ಷರಿ” ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿಜ್ಞಾನ ವಿಭಾಗವು  ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದರೆ, ಸಿವಿಲ್ ಮತ್ತು ಎಲೆಕ್ಟ್ರಿಕಲ್ ನ ತಂಡವು ದ್ವಿತೀಯ ಸ್ಥಾನ ಪಡೆದುಕೊಂಡಿತು. ಪ್ರೊ. ನಿಖಿಲ್ ಕುಲಕರ್ಣಿ, ಪ್ರೊ. ಕಿರಣ್ ಕುಮಾರ್ ಹಿಟ್ಟಣಗಿ  ನಿರ್ಣಾಯಕ ರಾಗಿದ್ದರು. 

ಕನ್ನಡ ಭಾಷೆಯ ಕುರಿತು ಅರಿವು ಮೂಡಿಸುವ  ಹಾಗೂ ಸಾಹಿತಿಗಳ ಸಾಧನೆಯ ಕುರಿತು ತಿಳಿಸುವ “ರಸಪ್ರಶ್ನೆ” ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಂಪ್ಯೂಟರ್ ಸೈನ್ಸ್ ವಿಭಾಗವು  ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದರೆ, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗವು ದ್ವಿತೀಯ ಸ್ಥಾನ ಪಡೆಯಿತು. ಪ್ರೊ. ಸುಧೀರ ಕುಲಕರ್ಣಿ  ಹಾಗೂ ಪ್ರೊ. ಸೀಮಾ ಬಸರಿಕಟ್ಟಿ  ನಿರ್ಣಾಯಕ ರಾಗಿ ಕಾರ್ಯನಿರ್ವಹಿಸಿದ್ದರು. “ಪದಬಂಧ” ಸ್ಪರ್ಧೆಯಲ್ಲಿ  ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗವು  ಪ್ರಥಮ ಸ್ಥಾನ ಪಡೆದರೆ, ಸಿವಿಲ್ ಮತ್ತು ಎಲೆಕ್ಟ್ರಿಕಲ್ ವಿಭಾಗ ದ್ವಿತೀಯ ಸ್ಥಾನ ಪಡೆಯಿತು. 

“ಕನ್ನಡ ಒತ್ತಕ್ಷರ” ಬರೆಯುವ ಸ್ಪರ್ಧೆಯಲ್ಲಿ  ಕಂಪ್ಯೂಟರ್ ಸೈನ್ಸ್ ವಿಭಾಗದ  ಪ್ರೊ. ಜಯಶ್ರೀ ಎಸ್, ಪ್ರೊ. ಶಿವನಗೌಡ  ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದುಕೊಂಡರು. ಪ್ರೊ. ಮಂಜುನಾಥ ಮತ್ತು  ಪ್ರೊ. ಸುಧೀರ್ ಕುಲಕರ್ಣಿ ತೀರ್ಪುಗಾರರಾಗಿದ್ದರು. “ಆಶುಭಾಷಣ ಸ್ಪರ್ಧೆ”ಯಲ್ಲಿ  ಕಂಪ್ಯೂಟರ್ ಸೈನ್ಸ್ ವಿಭಾಗದ  ಪ್ರೊ. ಭೀಮಣ್ಣ  ಪ್ರಥಮ ಸ್ಥಾನ ಪಡೆದರೆ, ಎಲೆಕ್ಟ್ರಿಕಲ್ ವಿಭಾಗದ ಪ್ರೊ. ಸುಬ್ರಹ್ಮಣ್ಯ ಹೆಚ್ ದ್ವಿತೀಯ ಸ್ಥಾನ ಪಡೆದರು. ಪ್ರೊ. ಫರಜಾನಾ  ನದಾಫ್ ಹಾಗೂ ಪ್ರೊ. ಲಕ್ಷ್ಮಿ ಹಟ್ಟಿ ಹೋಳಿ ನಿರ್ಣಾಯಕ ರಾಗಿದ್ದರು. “ಕನ್ನಡದಲ್ಲಿ ಟೈಪಿಂಗ್” ಮಾಡುವ ಸ್ಪರ್ಧೆಯಲ್ಲಿ ಎಲೆಕ್ಟ್ರಾನಿಕ್ಸ್ ವಿಭಾಗದ ಪ್ರೊ. ಪೂಜಾ ಶಿಂದೆ ಪ್ರಥಮ  ಹಾಗೂ ಸಿವಿಲ್ ವಿಭಾಗದ ಪ್ರೊ. ಲಕ್ಷ್ಮಿಹಟ್ಟಿ ಹೋಳಿ ದ್ವಿತೀಯ ಸ್ಥಾನ ಪಡೆದುಕೊಂಡರು. ಪ್ರೊ. ಸುಬ್ರಹ್ಮಣ್ಯ ಹೆಗಡೆ ನಿರ್ಣಾಯಕ ರಾಗಿ ಕಾರ್ಯನಿರ್ವಹಿಸಿದರು. ಈ ಎಲ್ಲಾ ಕಾರ್ಯಕ್ರಮಗಳನ್ನು  ಕನ್ನಡ ಕಲ್ಪವೃಕ್ಷ ಸಂಘದಿಂದ  ಆಯೋಜಿಸಲಾಗಿತ್ತು. 

ಕನ್ನಡ ಕಲ್ಪವೃಕ್ಷ ಸಂಘದ ಕಾರ್ಯದರ್ಶಿ ಪ್ರೊ. ರೋಹಿಣಿ ಕಲ್ಲೂರ್ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಸಂಯೋಜಿಸಿದ್ದರು. ಮಹಾವಿದ್ಯಾಲಯದ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.


೬೮ನೆಯ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಲಾದ ಕಾರ್ಯಕ್ರಮಗಳ ವಿವರ

  1. ಹಾಡಿನ ಸ್ಪರ್ಧೆಯ ವರದಿ
  2. ಕಿರುಚಿತ್ರ ನಿರ್ಮಾಣ ಸ್ಪರ್ಧೆ
  3. ನೃತ್ಯ ಸ್ಪರ್ಧೆ
  4. ವೇಷಭೂಷಣ ಸ್ಪರ್ಧೆ

೬೮ನೆಯ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಲಾದ ಕಾರ್ಯಕ್ರಮಗಳ ರಸನಿಮಿಷಗಳು

ಕರ್ನಾಟಕ ರಾಜ್ಯೋತ್ಸವದ ರಸ ನಿಮಿಷಗಳು

ಸಂಘದಿಂದ ಅಯೋಜಿಸಲ್ಪಟ್ಟ ಕಾರ್ಯಕ್ರಮಗಳು

ಕರ್ನಾಟಕ ರಾಜ್ಯೋತ್ಸವ ಆಚರಣೆ
ಕಲ್ಪವೃಕ್ಷ ಕನ್ನಡ ಸಂಘದ ಸದಸ್ಯರ ವಿವರ.
ಕನ್ನಡ ಸಾಹಿತ್ಯ ಪರಿಷತ್ ಸದಸ್ಯತ್ವ ಅಭಿಯಾನ.